17 ನೇ ಸಾಕ್ಷಿಗೆ ಬೆದರಿಕೆ ಕರೆ.!ಸತ್ಯ ಹೇಳ್ಬೇಡ.!ಹೇಳಿದ್ರೆ?ಜಡ್ಜ್ ಗರಂ.!ಸಾಕ್ಷಿಗೆ ಭದ್ರತೆ.! -darshan case live
Jul 1, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration11:16
Video IDtu_NlzXGfwM
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views27.2K
Likes363
Comments82
Engagement Rate1.63%
Likes per 100 views1.33
Comments per 1K views3.01
Video Tags
#renukaswamy case latest update#darshan case witness threatened#darshan bail update today#sandeep witness renukaswamy case#bengaluru court darshan case#actor darshan case trial#witness 17 threatened darshan case#kannada news live#crime news kannada#sessions court bengaluru darshan#supreme court darshan bail#justice for renukaswamy
Description
#RenukaswamyCase #DarshanThogudeepa #DarshanCase #WitnessThreatened #SandeepWitness #DarshanBail #Sandalwood #BengaluruCourt #KarnatakaNews #BreakingNewsKannada #DarshanArrest #CrimeNewsKannada #JusticeForRenukaswamy #KannadaNews Updates #DasaDarshan
ವಿವರಣೆ:--
ಚಿತ್ರದುರ್ಗದ ರೇಣುಕಾಸ್ವಾಮಿ ಹ** ಪ್ರಕರಣದ ನ್ಯಾಯಾಂಗ ವಿಚಾರಣೆ (Trial) ವೇಳೆ ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ 17ನೇ ಪ್ರಮುಖ ಸಾಕ್ಷಿಯಾಗಿರುವ ತುಮಕೂರಿನ ಸಂದೀಪ್ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ನಿರಂತರ ಬೆದರಿಕೆ ಕರೆಗಳು ಬಂದಿವೆ. ಕೋರ್ಟ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಾಕ್ಷಿ ಸಂದೀಪ್, ತಮಗೆ ಜೀವಭಯ ಇರುವುದಾಗಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ."ಆರೋಪಿಗಳ ಪರವಾಗಿ ಸಾಕ್ಷಿ ನುಡಿಯಬೇಕು, ಸತ್ಯವನ್ನು ಮರೆಮಾಚಬೇಕು. ಇಲ್ಲದಿದ್ದರೆ ನಿನ್ನ ಕಥೆ ಮುಗಿಸುತ್ತೇವೆ" ಎಂದು ಅನಾಮಧೇಯರು ಬೆದರಿಕೆ ಹಾಕಿದ್ದಾರೆ ಎಂದು ಸಾಕ್ಷಿ ಕೋರ್ಟ್‌ಗೆ ತಿಳಿಸಿದ್ದಾರೆ.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಸಾಕ್ಷಿ ಸಂದೀಪ್‌ಗೆ ತಕ್ಷಣವೇ ಜಾರಿಗೆ ಬರುವಂತೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ತನಿಖಾಧಿಕಾರಿಗೆ ಕಡಕ್ ಆದೇಶ ನೀಡಿದ್ದಾರೆ.ಅಲ್ಲದೆ, ತಮಗೆ ಬಂದಿರುವ ಬೆದರಿಕೆ ಕರೆಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಪ್ರತ್ಯೇಕ ಅಫಿಡವಿಟ್ ಸಲ್ಲಿಸುವಂತೆ ಸಾಕ್ಷಿಗೆ ಸೂಚಿಸಲಾಗಿದೆ.
ಈ ಘಟನೆಯು ನಟ ದರ್ಶನ್ ಮತ್ತು ಗ್ಯಾಂಗ್‌ನ ಜಾಮೀನು ಪ್ರಕ್ರಿಯೆಗೆ ಮತ್ತು ಕಾನೂನು ಹೋರಾಟಕ್ಕೆ ಅತಿ ದೊಡ್ಡ ನೆಗೆಟಿವ್ ಹೊಡೆತ ನೀಡುವ ಸಾಧ್ಯತೆ ದಟ್ಟವಾಗಿದೆ. ಸಾಕ್ಷಿಗಳನ್ನು ಹೈಜಾಕ್ ಮಾಡಲು ಯತ್ನಿಸುತ್ತಿರುವ ಆ ಕಿರಾತಕರು ಯಾರು? ಇದರ ಕಂಪ್ಲೀಟ್ ಡಿಟೇಲ್ಸ್ ಈ ವಿಡಿಯೋದಲ್ಲಿದೆ, ಪೂರ್ತಿಯಾಗಿ ನೋಡಿ.
=================================